Hariprasad’s Weblog

Tamasoma Jyotirgamaya – May HE lead us from ignorance to knowledge

Dasanagu Visheshanagu

leave a comment »

Lyrics courtesy the comments at the YouTube site for this extraordinary song

ದಾಸನಾಗೋ ಭವಪಾಶ ನೀಗೋ
ಏಸೋ ಕಾಯಂಗಳ ಕಳೆದು ಎಂಬತ್ನಾಲ್ಕುಲಕ್ಷ ಜೀವ
ರಾಶಿಯನ್ನು ದಾಟಿ ಬಂದ ಈ ಶರೀರ ತಾನಲ್ಲ ತನ್ನದಲ್ಲಾ
ಆಸೆ ತರವಲ್ಲ ಮುಂದೆ ಬಾಹೋದಲ್ಲಾ
ದಾಸನಾಗು ವಿಷೇಶನಾಗೋ
ಆಶಾಕ್ಲೇಶ ದೋಷವೆಂಬ ಅಬ್ಧಿಯೊಳು ಮುಳುಗಿ ಯಮನ
ಪಾಶಕ್ಕೋಳಗಾಗದೆ ನಿರ್ದೋಷಿಯಾಗೋ ಸಂತೋಷಿಯಾಗೋ

ಕಾಶಿ,ವಾರಣಸಿ,ಕಂಚಿ, ಕಾಳಹಸ್ತಿ, ರಾಮೇಶ್ವರ,
ಏಸು ದೇಶ ತಿರುಗಿದರು ಬಾಹುದೇನೊ-ಅಲ್ಲಾ ಆಹೊದೇನೋ
ದೋಷನಾಶ ಕೃಷ್ಣವೇಣಿ ಗಂಗೆ ಗೋದವರಿ ಭವ
ನಾಶಿ ತುಂಗಭದ್ರೆ ಯಮುನೆ ವಾಸದಲ್ಲಿ ಉಪವಾಸದಲ್ಲಿ
ಮೀಸಲಾಗಿ ಮಿಂದು ಜಪ-ತಪ,ಹೋಮ-ನೇಮಗಳ
ಏಸು ಬಾರಿ ಮಾಡಿದರು ಫಲವೇನು? ಛಲವೇನು?

ಅಂದಿಗೊ ಇಂದಿಗೋ ಒಮ್ಮೆ ಸಿರಿ ಕಮಲೇಶನನ್ನು
ಒಂದು ಬಾರಿಯಾದರು ಹಿಂದೆ ನೆನೆಯಲ್ಲಿಲ್ಲಾ ಮನ ತಣಿಯಲಿಲ್ಲಾ
ಬಂದುಬಂದು ಭ್ರಮೆಗೊಂಡು ಮಾಯಮೋಹಕ್ಕೆ ಸಿಕ್ಕಿ
ನೊಂದು ಬೆಂದು ಒಂದರಿಂದ ಉಳಿಯಲಿಲ್ಲಾ ಬಂಧ ಕಳೆಯಲ್ಲಿಲ್ಲಾ
ಸಂದೇಹವ ಮಾಡದಿರು ಅರಿವು ಎಂಬ ದೀಪವಿಟ್ಟು
ಇಂದು ಕಂಡ್ಯ ದೇಹದಲ್ಲಿ ಪಿಂಡಾಂಡ ಹಾಗೆ ಬ್ರಹ್ಮಾಂಡ
ಇಂದು ಹರಿಯ ಧ್ಯಾನವನ್ನು ಮಾಡಿ ವಿವೇಕದಿ ಮು-
ಕುಂದನಿಂದ ಮುಕ್ತಿ ಬೇಡು ಕಂಡ್ಯ ನೀ ನೋಡು ಕಂಡ್ಯಾ?

ದಾಸನಾಗು ವಿಷೇಶನಾಗು….

ನೂರು ಬಾರಿ ಶರಣು ಮಾಡಿ ನೀರ ಮುಳುಗಲ್ಯಾಕೆ? ಪರ-
ನಾರಿಯರ ನೋಟಕೆ ಗುರಿಯಮಾಡಿದಿ?ಮನ ಸೆರೆಯ ಮಾಡಿದಿ?
ಸೋರೆಯೊಳು ಸುರೆ ತುಂಬಿ ಮೇಲೆ ಹೂವಿನ ಹಾರ ಹಾಕಿ
ಗೀರುಗಂಧ ಅಕ್ಷತೆಯ ಧರಿಸಿದಂತೆ ನೀ ಮೆರೆಸಿದಂತೆ
ಗಾರುಡಿಯ ಮತ ಬಿಟ್ಟು ನಾದಬ್ರಹ್ಮನ ಪಿಡಿದು
ಸಾರಿಸಾರಿ ಮುಕ್ತಿಯನ್ನು ಶಮನದಿಂದ ಮತ್ತೆ ಸುಮನದಿಂದ
ನಾರಯಣ ಅಚ್ಯುತಾನಂತಾದಿಕೇಶವನ
ಸಾರಮೃತವನೂಂಡು ಸುಖಿಸೋಲಂಡಜೀವವೆ ಎಲೋಭಂಡಜೀವವೆ…
ದಾಸನಾಗು ವಿಷೇಶನಾಗು
ಏಸು ಕಾಯನ್ಗಳ ಕಳೆದು ೮೪ ಲಕ್ಷ ಜೀವ ರಾಶಿಯನ್ನು ದಾಟಿ ಬಂದ
ಈ ಶರೀರ ತಾನಲ್ಲ ತನ್ನದಲ್ಲಾ ಆಸೆ ತರವಲ್ಲ ಮುಂದೆ ಬಾಹೋದಲ್ಲಾ
ದಾಸನಾಗು ವಿಷೇಶನಾಗು, ದಾಸನಾಗು ಭವ ಪಾಶನೀಗೋ

Written by Hariprasad

March 28, 2014 at 10:33 am

Posted in dvaita

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: