Hariprasad’s Weblog

Tamasoma Jyotirgamaya – May HE lead us from ignorance to knowledge

ಕನ್ನಡಕ್ಕೆ ಕನ್ನಡಿಗರ ಉದಾರತನವೇ ಕುತ್ತು

with 2 comments

ವಾರಕ್ಕೆ ೨-೩ ಬಾರಿ ನಾನು ದೇವರ ಪೂಜೆಗೆ ಹೂವು, ತುಲಸಿ ಖರೀದಿಸುತ್ತೇನೆ. ನೆನ್ನೆ ಹೂವು ಮಾರುವವಳ ಬಳಿ ತುಂಬಾ ಗ್ರಾಹಕರಿದ್ದ ಕಾರಣ ಕೊಂಚ ಕಾಯಬೇಕಾಯಿತು. ಆಗ ಗಮನಿಸಿದ ಒಂದು ಅಂಶ ನನ್ನನ್ನು ಆಲೋಚಿಸುವಂತೆ ಮಾಡಿತು.

ಹೂವು ಮಾರುವವಳು ಕನ್ನಡದವಳು. ಸ್ಥಳ ಬೆಂಗಳೂರು. ಆದರೂ ಖರೀದಿಸುವವರನ್ನು ನೋಡಿ ಅವರ ಭಾಷೆಯಲ್ಲೇ ಮಾತನಾಡುವ ಪ್ರಯತ್ನ ನಡೆಸುತ್ತಿದ್ದಳು. ಒಂದು ಬೆಂಗಾಳಿ ಹೆಂಗಸಿನೋಟ್ಟಿಗೆ ಅವಳ “ಹಿಂದಿ” ಸಂಭಾಷಣೆ ಕೇಳಿ ನನಗೆ ನಗೆ ತಡೆದುಕೊಳ್ಳುವುದು ಕಷ್ಟವಾಯಿತು. ಇನ್ನೊಂದು ಗ್ರಾಹಕನ ಒಟ್ಟಿಗೆ ನಡೆಸಿದ ತೆಲುಗು ಸಂಭಾಷಣೆ ನನಗೆ ತಲೆ ಬುಡ ಅರ್ಥವಾಗಲಿಲ್ಲ. ಆ ಗ್ರಾಹಕನ ಪಾಡು ನನ್ನಂತೆಯೇ ಇದ್ದದ್ದು ನೋಡಿ ಸ್ವಲ್ಪ ಸಮಾಧಾನವಾಯಿತು🙂

ಕೆಲವೊಮ್ಮೆ ಪರಿಸ್ಥಿತಿಗೆ ಮಣಿದು ಪರ ರಾಜ್ಯಾ ಭಾಷೆಯನ್ನು ನಾವು ಬಳಸಬೇಕಾಗಬಹುದು. ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾರಾದರೂ ವಾಹನ ನಿಲ್ಲಿಸಿ ಬೇರೆ ಭಾಷೆಯಲ್ಲಿ ಜಾಗ ವಿಚಾರಿಸಿದರೆ ಬಹುಷ ಬೇರೆ ಊರಿನಿಂದ ಬಂದವರು ಎಂದುಕೊಂಡು ಸಹಾಯ ಮಾಡುವ ಉದ್ದೇಶದಿಂದ ಅವರಿಗೆ ಅರ್ಥೈಸುವ ಪ್ರಯತ್ನ ಮಾಡಿದರೆ ತಪ್ಪಿಲ್ಲ ಎಂದು ಭಾವಿಸುತ್ತೇನೆ. ಆದರೆ ನಮ್ಮದೇ ಊರು, ನಮ್ಮದೇ ಗಲ್ಲಿ, ಬೇರೆ ವಿಧಿಯಿಲ್ಲದ ಗ್ರಾಹಕರು, ಹೀಗಿದ್ದರೂ ನಮ್ಮ ಜನರೇ ಅನ್ಯ ಭಾಷಾ ಪ್ರಯೋಗ ಮಾಡುತ್ತಾರೆ ಎಂದರೆ ಏನು ಹೇಳೋನ?

ನನ್ನ ಪ್ರಕಾರ ನಮ್ಮ ಭಾಷೆ ಕೀಳು, ಬೇರೆ ಭಾಷೆಗಳು ನಮ್ಮದಕ್ಕಿಂತ ಉತ್ತಮ ಎಂಬ ತಪ್ಪು, ಆದರೆ ಗಾಢವಾದ, ನಂಬಿಕೆ ನಮ್ಮ ಜನರಲ್ಲಿ ಬಂದು ಬಿಟ್ಟಿದೆ. ಬಹುಷ ಬೇರೆ ಊರಿನಿಂದ ಬಂದ ಜನ, ಒಳ್ಳೆಯ ಉದ್ಯೋಗ ಪಡೆದು, ಒಳ್ಳೆಯ ಸಂಬಳ ಗಿಟ್ಟಿಸಿಕೊಂಡು, ಆರಾಮವಾಗಿ ಮಜ ಮಾಡುವದನ್ನು ನೋಡಿ, ಬೇರೆ ಏನೂ ವ್ಯತ್ಯಾಸ ಕಂಡು ಹಿಡಿಯಲಾರದೆ ಭಾಷೆಯಿಂದಲೇ ಅವರಿಗೆ ಉತ್ತಮತ್ವ ಬಂದಿರಬೇಕೆ ಎಂಬ ತಪ್ಪು ಕಲ್ಪನೆ ಇದೆಯೋ ಏನೋ.

ಕನ್ನಡದವರೇ ಆದ, ಉತ್ತಮ ಶಿಕ್ಷಣ, ಉದ್ಯೋಗ, ಸಾಮಾಜಿಕ ಸ್ಥಾನಮಾನ ಇರುವ ಜನರು, ಇಂಥಾ ಪರಿಸ್ಥಿತಿಯಲ್ಲಿ ಮುಂದೆ ಬಂದು ಕನ್ನಡದ ಬಗ್ಗೆ, ಕನ್ನಡ ಭಾಷೆ, ಸಂಸ್ಕೃತಿಯ ಬಗ್ಗೆ ಹೆಮ್ಮ ಮತ್ತು ಪ್ರೀತಿಯನ್ನು ಪ್ರದರ್ಶಿಸಬೇಕು. ಅವರ ಗಾಳಿ ಈ ಕಳವಳ ಮನಸ್ಥಿತಿಯಲ್ಲಿರುವ ಜನರಿಗೆ ತಾಗಿದರೆ ಕೊಂಚ ರೋಗ ಪರಿಹಾರ ಆಗಬಹುದೋ ಏನೋ?

Written by Hariprasad

December 6, 2010 at 1:48 pm

2 Responses

Subscribe to comments with RSS.

  1. ನಿಮ್ಮ ಲೇಖನ ಬೆಂಗಳೂರಿನಲ್ಲಿ ಈಗಿರುವ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ. ನೀವು ಆ ಹೂವು ಮಾರುವವಳೊಂದಿಗೆ ನಿಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದೀರೆಂದು ನಾನು ಭಾವಿಸಿದ್ದೇನೆ.
    ಕೆಲವೊಮ್ಮೆ ನಾವು ಮಾಡುವ ತಪ್ಪುಗಳನ್ನು ಬೇರೆಯವರು ನಮ್ಮ ಗಮನಕ್ಕೆ ತರದಿದ್ದರೆ ಅದು ಹಾಗೆಯೋ ಭದ್ರವಾಗಿ ಬೇರೂರುತ್ತದೆ.

    ಹರೀಶ

    December 6, 2010 at 10:14 pm


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: